Blood Sugar Level: ಮೊಟ್ಟೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತಾ? ಇಲ್ಲಿದೆ ತಜ್ಞರ ಅಭಿಪ್ರಾಯ!

Blood Sugar Level Control Tips: ಅನೇಕ ಮನೆಗಳಲ್ಲಿ, ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆಗಳನ್ನು ಸೇವಿಸಲಾಗುತ್ತದೆ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ. ಸಂಪೂರ್ಣ ಸತ್ಯ ಏನು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Apr 29, 2024, 01:16 PM IST
  • ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಿಕೊಳ್ಳಬಹುದು.
  • ನೀವು ಸರಿಯಾದ ಪ್ರಮಾಣದಲ್ಲಿ ಮೊಟ್ಟೆಗಳನ್ನು ಸೇವಿಸಿದರೆ, ಹೃದ್ರೋಗದ ಅಪಾಯವಿರುವುದಿಲ್ಲ.
  • ನೀವು ಆಮ್ಲೆಟ್ ಅಥವಾ ಹುರಿದ ರೂಪದಲ್ಲಿ ಮೊಟ್ಟೆಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಬಹುದು.
Blood Sugar Level: ಮೊಟ್ಟೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತಾ? ಇಲ್ಲಿದೆ ತಜ್ಞರ ಅಭಿಪ್ರಾಯ! title=

Tips To Control Blood Sugar Level: ಮೊಟ್ಟೆ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆಯೇ? ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಏನನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಅನೇಕ ಮನೆಗಳಲ್ಲಿ ಮೊಟ್ಟೆ ಒಂದು ಸಾಮಾನ್ಯ ಬೆಳಗಿನ ಉಪಹಾರವಾಗಿದೆ. ಜನರು ಬೆಳಗ್ಗೆ ಎಗ್ ಬ್ರೆಡ್ ಅಥವಾ ಬೇಯಿಸಿದ ಮೊಟ್ಟೆಯನ್ನು ತಿನ್ನುತ್ತಾರೆ. ನೀವು ನಿಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿದರೆ ಉತ್ತಮ. ಏಕೆಂದರೆ ಇದು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳಿವೆ. ಮೊಟ್ಟೆ ತಿಂದ ನಂತರ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದರೆ ಮಧುಮೇಹದಿಂದಾಗಿ, ದೇಹದಲ್ಲಿನ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹದಗೆಡುತ್ತದೆ. ಮಧುಮೇಹ ಇರುವವರು ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ. ಒಂದು ಮೊಟ್ಟೆಯಲ್ಲಿ ಸುಮಾರು 200 ಮಿಗ್ರಾಂ ಆಹಾರದ ಕೊಲೆಸ್ಟ್ರಾಲ್ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಕ್ಕರೆ ಕಾಯಿಲೆ ಇರುವವರು ಮೊಟ್ಟೆ ತಿನ್ನಬೇಕೋ ಬೇಡವೋ, ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೋ ಇಲ್ಲವೋ ಎಂಬ ಪ್ರಶ್ನೆಗಲೌ ಜನರ ಮನದಲ್ಲಿ ಮೂಡುವುದು ಸಹಜ.  ಈ ಲೇಖನದ ಮೂಲಕ ನಿಮ್ಮ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವ ಪ್ರಯತ್ನ ಮಾಡೋಣ ಮತ್ತು ಆಹಾರ ತಜ್ಞರು ಈ ಕುರಿತು ಏನು ಹೇಳುತ್ತಾರೆ ತಿಳಿದುಕೊಳ್ಳೋಣ, 

ಮೊಟ್ಟೆ ತಿಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆಯೇ (Does Eating Eggs Lowers Blood Sugar Level)
ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಮೊಟ್ಟೆಗಳಲ್ಲಿ ಇರುತ್ತವೆ. ಮೊಟ್ಟೆಗಳನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೇರವಾಗಿ ಕಡಿಮೆ ಆಗುವುದಿಲ್ಲ. ಆದರೆ ಮೊಟ್ಟೆಯನ್ನು ಆರೋಗ್ಯಕರ ಆಹಾರದ ಭಾಗವಾಗಿ ಮಾಡುವುದರಿಂದ, ನೀವು ಖಂಡಿತವಾಗಿಯೂ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಕೊಬ್ಬು ಇರುತ್ತದೆ. ಈ ಎರಡು ಪೋಷಕಾಂಶಗಳನ್ನು ಸೇವಿಸುವುದರಿಂದ, ದೇಹವು ಇತರ ವಸ್ತುಗಳಿಂದ ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರಗಳಿಗೆ ಹೋಲಿಸಿದರೆ, ಮೊಟ್ಟೆಯಲ್ಲಿ ಕಾರ್ಬೋಹೈಡ್ರೇಟ್ಗಳ ಪ್ರಮಾಣವು ಕಡಿಮೆಯಾಗಿದೆ, ಆದ್ದರಿಂದ ಆರೋಗ್ಯಕರ ರೀತಿಯಲ್ಲಿ ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಮಧುಮೇಹ ಇರುವವರು ಮೊಟ್ಟೆಗಳನ್ನು ತಿನ್ನಬಹುದು.

ಇದನ್ನೂ ಓದಿ-IPL 2024: "ದೇವರಿಗೆ ಧನ್ಯವಾದ ನಾನು ಸಿಕ್ಸ್ ಹೊಡೆಯಲಿಲ್ಲ" Virat Kohli ಹೇಳಿಕೆಯ ಹಿಂದಿನ ಮರ್ಮ ಏನು? Watch Video

ಮಧುಮೇಹ ಅಥವಾ ಹೃದ್ರೋಗದ ಸಂದರ್ಭದಲ್ಲಿ ಮೊಟ್ಟೆಯನ್ನು ಹೇಗೆ ಸೇವಿಸಬೇಕು? (How to Eat Egg With Diabetes or Heart Disease, )
ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಿಕೊಳ್ಳಬಹುದು. ನೀವು ಸರಿಯಾದ ಪ್ರಮಾಣದಲ್ಲಿ ಮೊಟ್ಟೆಗಳನ್ನು ಸೇವಿಸಿದರೆ, ಹೃದ್ರೋಗದ ಅಪಾಯವಿರುವುದಿಲ್ಲ. ನೀವು ಆಮ್ಲೆಟ್ ಅಥವಾ ಹುರಿದ ರೂಪದಲ್ಲಿ ಮೊಟ್ಟೆಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಬಹುದು. ಆದರೆ, ನೀವು ಬೇಯಿಸಿದ ಮೊಟ್ಟೆಯನ್ನು ತಿನ್ನುತ್ತಿದ್ದರೆ ಅಥವಾ ಬೇಯಿಸಿದ ಮೊಟ್ಟೆಯಿಂದ ಭುರ್ಜಿ ಮಾಡಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಕುರಿತು ಹೇಳುವ ಆಹಾರ ತಜ್ಞರು, ಮೊಟ್ಟೆ ತಯಾರಿಸುವಾಗ ಕನಿಷ್ಠ ಎಣ್ಣೆ ಮತ್ತು ಮಸಾಲೆ ಬಳಸಬೇಕು. ಕಾರ್ನ್, ಕ್ಯಾನೋಲ ಅಥವಾ ಆಲಿವ್ ಎಣ್ಣೆಯನ್ನು ಮೊಟ್ಟೆ ಪದಾರ್ಥಗಳಿಗಾಗಿ ಬಳಸಬಹುದು. ಇದಲ್ಲದೆ, ಮೊಟ್ಟೆಗಳನ್ನು ಬೇಯಿಸಲು ಹೆಚ್ಚಿನ ತರಕಾರಿಗಳನ್ನು ಬಳಸಿ. ಮೊಟ್ಟೆಗಳೊಂದಿಗೆ ಬಿಳಿ ಬ್ರೆಡ್ ಅಥವಾ ಚೀಸ್ ಸೇವಿಸುವುದನ್ನು ತಪ್ಪಿಸಿ.

ಇದನ್ನೂ ಓದಿ-IPL 2024 CSK vs SRH: "ಮಗು ಜನಿಸಬೇಕಿದೆ, ಪಂದ್ಯ ಬೇಗ ಮುಗಿಸಿ" SRH ವಿರುದ್ಧದ ಪಂದ್ಯದ ವೇಳೆ Sakshi Dhoni ಹಂಚಿಕೊಂಡ ಪೋಸ್ಟ್ ವೈರಲ್!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು  ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News