ರಾಹುಲ್ ಅದ್ಭುತ ಕ್ಯಾಚ್ ಕಂಡು ಎದ್ದು ನಿಂತು ಚಪ್ಪಾಳೆ ತಟ್ಟಿದ ಸಂಜೀವ್ ಗೋಯಂಕಾ! “ಇದಪ್ಪಾ ಕನ್ನಡಿಗನ ಛಲ ಅಂದ್ರೆ” ಅಂತಿದ್ದಾರೆ ಫ್ಯಾನ್ಸ್

sanjiv goenka standing ovation: ಕೆಎಲ್ ರಾಹುಲ್ ಅವರ ಮುಂದೆ ಅಸಮಾಧಾನ ಹೊರ ಹಾಕಿರುವುದು ಕ್ಯಾಮರದಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಗೋಯೆಂಕಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಮಾಡಲಾಗಿತ್ತು. ಆದರೆ ಇಂದು ದೆಹಲಿ ವಿರುದ್ಧದ ಪಂದ್ಯದಲ್ಲಿ ಕಂಡು ಬಂದ ದೃಶ್ಯ ಅಚ್ಚರಿ ಮೂಡಿಸಿದೆ.

Written by - Bhavishya Shetty | Last Updated : May 14, 2024, 10:07 PM IST
    • ಹೈದರಾಬಾದ್ ತಂಡದಿಂದ ಹೀನಾಯ ಸೋಲು ಎದುರಿಸಿದ್ದ ಲಕ್ನೋ ತಂಡ
    • ಲಕ್ನೋ ತಂಡಕ್ಕೆ ಪಬ್ಲಿಕ್’ನಲ್ಲಿಯೇ ಸಂಜೀವ್ ಗೋಯೆಂಕಾ ಕ್ಲಾಸ್ ತೆಗೆದುಕೊಂಡಿದ್ದರು
    • ಇಂದು ದೆಹಲಿ ವಿರುದ್ಧದ ಪಂದ್ಯದಲ್ಲಿ ಕಂಡು ಬಂದ ದೃಶ್ಯ ಅಚ್ಚರಿ ಮೂಡಿಸಿದೆ
ರಾಹುಲ್ ಅದ್ಭುತ ಕ್ಯಾಚ್ ಕಂಡು ಎದ್ದು ನಿಂತು ಚಪ್ಪಾಳೆ ತಟ್ಟಿದ ಸಂಜೀವ್ ಗೋಯಂಕಾ! “ಇದಪ್ಪಾ ಕನ್ನಡಿಗನ ಛಲ ಅಂದ್ರೆ” ಅಂತಿದ್ದಾರೆ ಫ್ಯಾನ್ಸ್ title=
sanjiv goenka standing ovation

Sanjiv Goenka and KL Rahul: ಪ್ಲೇಆಫ್‌’ಗಾಗಿ ಲಕ್ನೋ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡುತ್ತಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡದಿಂದ ಹೀನಾಯ ಸೋಲು ಎದುರಿಸಿದ್ದ ಲಕ್ನೋ ತಂಡಕ್ಕೆ ಪಬ್ಲಿಕ್’ನಲ್ಲಿಯೇ ಸಂಜೀವ್ ಗೋಯೆಂಕಾ ಕ್ಲಾಸ್ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

ಕೆಎಲ್ ರಾಹುಲ್ ಅವರ ಮುಂದೆ ಅಸಮಾಧಾನ ಹೊರ ಹಾಕಿರುವುದು ಕ್ಯಾಮರದಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಗೋಯೆಂಕಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಮಾಡಲಾಗಿತ್ತು. ಆದರೆ ಇಂದು ದೆಹಲಿ ವಿರುದ್ಧದ ಪಂದ್ಯದಲ್ಲಿ ಕಂಡು ಬಂದ ದೃಶ್ಯ ಅಚ್ಚರಿ ಮೂಡಿಸಿದೆ.

ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲ ಓವರ್‌’ನಲ್ಲಿಯೇ ಮಾರಕ ಬ್ಯಾಟ್ಸ್‌ಮನ್ ಜೇಕ್ ಫ್ರೇಸರ್ ಅವರ ವಿಕೆಟ್ ಪಡೆಯುವ ಮೂಲಕ ತಂಡವು ಉತ್ತಮ ಆರಂಭವನ್ನು ಮಾಡಿತು.

 

 

ಇದನ್ನೂ ಓದಿ: ಪ್ಲೇಆಫ್ ಎಂಟ್ರಿ ಪಡೆಯಲು ಚೆನ್ನೈ ವಿರುದ್ಧ ಇಷ್ಟು ಅಂತರದಲ್ಲಿ ಗೆಲ್ಲಲೇಬೇಕು ಬೆಂಗಳೂರು: ಬದಲಾಗುವುದೇ RCB ಅದೃಷ್ಟ?

ಆದರೆ ಇನ್ನೊಂದು ತುದಿಯಲ್ಲಿ ಯುವ ಅಭಿಷೇಕ್ ಪೊರೆಲ್ ಮುನ್ನಡೆ ಸಾಧಿಸಿದರು. ಸ್ಫೋಟಕ ರೀತಿಯಲ್ಲಿ ಐವತ್ತು ರನ್ ಬಾರಿಸಿದರು. 58 ರನ್‌ಗಳಲ್ಲಿ ಬ್ಯಾಟಿಂಗ್‌’ನಲ್ಲಿದ್ದಾಗ ಪೊರೆಲ್ ಶಾಟ್ ಹೊಡೆದರು. ಆಗ ಚೆಂಡು ವೇಗವಾಗಿ ರಾಹುಲ್ ಕಡೆಗೆ ಹೋಯಿತು, ಕ್ಯಾಚ್ ಬಹುತೇಕ ಮಿಸ್ ಆಗಿತ್ತು. ಆದರೆ ಕೆಎಲ್ ರಾಹುಲ್ ಚಾಣಾಕ್ಷತನ ತೋರಿ ಮತ್ತೊಮ್ಮೆ ಈ ಕ್ಯಾಚ್ ಹಿಡಿದರು. ಅದ್ಭುತ ಕ್ಯಾಚ್ ನೋಡಿದ ಸಂಜೀವ್ ಗೋಯೆಂಕಾ ರಾಹುಲ್’ಗೆ ನಿಂತು ಚಪ್ಪಾಳೆ ತಟ್ಟಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News