Amazon Great Summer saleನಲ್ಲಿ ಈ ಸ್ಮಾರ್ಟ್ ಫೋನ್ ಗಳ ಮೇಲೆ ಸಿಗಲಿದೆ ಭಾರೀ ರಿಯಾಯಿತಿ!

Amazon Great Summer sale : Amazon ಸೇಲ್‌ನಲ್ಲಿ 8 OnePlus ಫೋನ್‌ಗಳ ಮೇಲೆ ರಿಯಾಯಿತಿ ಇರುತ್ತದೆ. ಇವುಗಳಲ್ಲಿ OnePlus 12, OnePlus Nord CE 4, OnePlus 12R, OnePlus Nord 3 ನಂತಹ ಪ್ರಸಿದ್ಧ ಮಾದರಿಗಳು ಸೇರಿವೆ.  

Written by - Ranjitha R K | Last Updated : Apr 29, 2024, 03:31 PM IST
  • ಅಮೆಜಾನ್‌ನ ಗ್ರೇಟ್ ಸಮ್ಮರ್ ಸೇಲ್ ಶೀಘ್ರದಲ್ಲೇ ಪ್ರಾರಂಭ
  • ಸೇಲ್ ದಿನಾಂಕಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
  • ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ರಿಯಾಯಿತಿಗಳು ಲಭ್ಯ
Amazon Great Summer saleನಲ್ಲಿ ಈ ಸ್ಮಾರ್ಟ್ ಫೋನ್ ಗಳ ಮೇಲೆ ಸಿಗಲಿದೆ ಭಾರೀ ರಿಯಾಯಿತಿ!  title=

Amazon Great Summer sale : ಅಮೆಜಾನ್‌ನ ಗ್ರೇಟ್ ಸಮ್ಮರ್ ಸೇಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸೇಲ್ ದಿನಾಂಕಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.ಆದರೆ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ರಿಯಾಯಿತಿಗಳು ಸಿಗಲಿವೆ ಎನ್ನುವುದು ಮಾತ್ರ ಖಚಿತವಾಗಿದೆ.ಮಾಹಿತಿಯ ಪ್ರಕಾರ ಈ ಸೇಲ್ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಡೀಲ್ ನೀಡಲಿದೆ. ಯಾವ ಮೊಬೈಲ್ ಫೋನ್ ಗಳ ಮೇಲೆ ರಿಯಾಯಿತಿ ಸಿಗಲಿದೆ ಎಂಬ ಲಿಸ್ಟ್ ಕೂಡಾ ನೀಡಲಾಗಿದೆ. Amazon ಸೇಲ್‌ನಲ್ಲಿ 8 OnePlus ಫೋನ್‌ಗಳ ಮೇಲೆ ರಿಯಾಯಿತಿ ಇರುತ್ತದೆ.ಇವುಗಳಲ್ಲಿ OnePlus 12, OnePlus Nord CE 4, OnePlus 12R, OnePlus Nord 3 ನಂತಹ ಪ್ರಸಿದ್ಧ ಮಾದರಿಗಳು ಸೇರಿವೆ.

ಈ ಫೋನ್‌ಗಳ ಮೇಲೆ ರಿಯಾಯಿತಿ : 
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ, Redmi 13C, Redmi Note 13 Pro, Samsung Galaxy M34, Xiaomi 14, Samsung Galaxy S23, iQOO Z9, Galaxy S24, Tecno Pova 6 Pro ನಂತಹ ಅನೇಕ ಫೋನ್‌ಗಳಲ್ಲಿ ರಿಯಾಯಿತಿಗಳು ಲಭ್ಯವಿರುತ್ತವೆ.ಈ ಫೋನ್‌ಗಳ ನಿಖರವಾದ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಸೇಲ್ ಪ್ರಾರಂಭವಾಗುವ ಕೆಲವು ದಿನಗಳ ಮೊದಲು ಅಥವಾ ಮಾರಾಟದ ಸಮಯದಲ್ಲಿಯೇ ಅವುಗಳನ್ನು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : iQOO Z6 Lite 5G: ಅತ್ಯಂತ ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌!

ಐಫೋನ್‌ಗಳ ಮೇಲೂ ರಿಯಾಯಿತಿ : 
ಕೆಲವು ಹೊಸ ದುಬಾರಿ ಫೋನ್‌ಗಳ ಮೇಲೆ ರಿಯಾಯಿತಿಗಳು ಸಿಗಲಿವೆ ಎಂದು Amazon ಹೇಳುತ್ತಿದೆ. ಆದರೆ, ಯಾವ ಐಫೋನ್‌ ಮೇಲೆ ರಿಯಾಯಿತಿ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೇಲ್‌ನಲ್ಲಿ ಆಪಲ್ ಫೋನ್‌ಗಳನ್ನು ಸಹ ಸೇರಿಸಲಾಗುವುದು ಎಂದು ಹೇಳಲಾಗಿದೆ.ಕಳೆದ ಅಮೆಜಾನ್  ಸೇಲ್ ನಲ್ಲಿ ನೀಡಿದಂತೆ ಬಹುಶಃ ಕೆಲವು ರಿಯಾಯಿತಿಗಳು iPhone 15 ಸರಣಿಯಲ್ಲಿ ಲಭ್ಯವಿರುವ ಸಾಧ್ಯತೆ ಇದೆ. 

Amazon ಸೇಲ್‌ನಲ್ಲಿ ವಿಶೇಷ ರೀತಿಯ ಕಾರ್ಡ್‌ಗಳ ಮೇಲೆ ಪ್ರಯೋಜನ ಸಿಗಲಿದೆ.  OneCard ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸುವುದರಿಂದ ನೀವು ಶೇಕಡಾ 10 ರಷ್ಟು ರಿಯಾಯಿತಿ ಪಡೆಯಬಹುದು. EMI ಆಯ್ಕೆಯನ್ನು ಸಹ ಇಲ್ಲಿ ನೀಡಲಾಗಿದೆ. ICICI ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕಾರ್ಡ್‌ಗಳ ಮೇಲೆ ಸ್ವಲ್ಪ ರಿಯಾಯಿತಿ ಪಡೆಯುವ ಸಾಧ್ಯತೆಯಿದೆ. Amazon Prime ಚಂದಾದಾರಿಕೆಯನ್ನು ಹೊಂದಿದ್ದರೆ, ಸೇಲ್ ಪ್ರಾರಂಭವಾಗುವ ಒಂದು ದಿನದ ಮೊದಲು ಎಲ್ಲಾ ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ನೋಡಲು ಸಾಧ್ಯವಾಗುತ್ತದೆ.  

ಇದನ್ನೂ ಓದಿ Snapchat : ಜಾಗತಿಕವಾಗಿ 422 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಸ್ನ್ಯಾಪ್ ಚಾಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News